ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಮೊದಲು ಎಚ್ಚರ! ಇಲ್ಲದಿದ್ದರೆ Pesticide residues ಗಳಿಂದ ನಿಮ್ಮ ಆರೋಗ್ಯಕ್ಕೆ ಅಪಾಯ!
ಇಂದಿನ ಕೃಷಿ ಪದ್ಧತಿಗಳಲ್ಲಿ, ಬೆಳೆಗಳನ್ನು ಕೀಟ ಹಾಗೂ ರೋಗಗಳ ಬಾದೆಳಿಂದ ರಕ್ಷಿಸಲು ಕೀಟನಾಶಕಗಳನ್ನು (Pesticides) ವ್ಯಾಪಕವಾಗಿ ಬಳಸಲಾಗುತ್ತಿದೆ. ಇದರಿಂದ ಬೆಳೆಗಳ ಉತ್ಪಾದನೆ ಹೆಚ್ಚಾಗುತ್ತದೆ, ಆದರೆ ಈ ರಾಸಾಯನಿಕಗಳ ಒಂದು ಭಾಗ ಬೆಳೆಗಳ ಮೇಲೆ ಹಾಗೇ ಉಳಿದುಕೊಳ್ಳುತ್ತದೆ. ಇದನ್ನೇ ಕೀಟನಾಶಕಗಳ ಶೇಷಗಳು (Pesticide residues) ಎಂದು ಕರೆಯುತ್ತಾರೆ. ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಬಹುದು.
ಹಣ್ಣು ಮತ್ತು ತರಕಾರಿಗಳು ಹೊಲದಲ್ಲಿ ಬೆಳೆಯುವ ಸಮಯದಲ್ಲಿ ಮಾತ್ರವಲ್ಲ, ಕೊಯ್ಯುವ ನಂತರವೂ ವಿವಿಧ ರಾಸಾಯನಿಕಗಳಿಗೆ ಒಳಪಡುವ ಸಾಧ್ಯತೆ ಇದೆ. ಸಾಗಣೆ (transport), ಸಂಗ್ರಹ (storage) ಮತ್ತು ಮಾರುಕಟ್ಟೆಯಲ್ಲಿ ಹೆಚ್ಚು ದಿನ ತಾಜಾ ಕಾಣಲು ಮೇಣದ ಲೇಪನ (wax coating) ಅಥವಾ ಸಂರಕ್ಷಣಾ ರಾಸಾಯನಿಕಗಳನ್ನು(Preservatives) ಬಳಸಲಾಗುತ್ತದೆ. ಈ ಎಲ್ಲ ಕಾರಣಗಳಿಂದ ನಾವು ಖರೀದಿಸುವ ಆಹಾರದಲ್ಲಿ ಕೀಟನಾಶಕಗಳ ಶೇಷಗಳು ಉಳಿಯಬಹುದು.
ನಾವು ಮಾರುಕಟ್ಟೆಯಲ್ಲಿ ಖರೀದಿಸುವ ಹಣ್ಣು ಮತ್ತು ತರಕಾರಿಗಳು ಬಹಳ ಚೆನ್ನಾಗಿ(ಹೊಳೆಯುವ, ತಾಜಾ ಮತ್ತು ಆಕರ್ಷಕ) ಕಾಣಬಹುದು. ಆದರೆ ಅವುಗಳಲ್ಲಿ ಕೀಟನಾಶಕ ಶೇಷಗಳು(Pesticide residues), ಬ್ಯಾಕ್ಟೀರಿಯಾ, ಮಣ್ಣು ಮತ್ತು ಹಾನಿಕಾರಕ ರಾಸಾಯನಿಕಗಳು ಇರಬಹುದು.
ಆದ್ದರಿಂದ, ಈ ಲೇಖನದಲ್ಲಿ ನಾವು ಹಣ್ಣು ಮತ್ತು ತರಕಾರಿಗಳಲ್ಲಿನ ಕೀಟನಾಶಕಗಳನ್ನು ಕಡಿಮೆ ಮಾಡುವ ಸರಳ, ನೈಸರ್ಗಿಕ ಮತ್ತು ವೈಜ್ಞಾನಿಕ ವಿಧಾನಗಳನ್ನು ವಿವರವಾಗಿ ತಿಳಿದುಕೊಳ್ಳೋಣ.
ದಿನನಿತ್ಯ ಜೀವನದಲ್ಲಿ ಇದು ಹೇಗೆ ನಮಗೆ ಪರಿಣಾಮ ಬೀರುತ್ತದೆ?
ನಾವು ಪ್ರತಿದಿನ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಮುಖ್ಯ. ಆದರೆ ಅವುಗಳನ್ನು ಸರಿಯಾಗಿ ತೊಳೆಯದೇ ಅಥವಾ ಶುದ್ಧಗೊಳಿಸದೇ ಸೇವಿಸಿದರೆ, ಸ್ವಲ್ಪ ಪ್ರಮಾಣದ ಕೀಟನಾಶಕಗಳು ನಮ್ಮ ದೇಹಕ್ಕೆ ಹೋಗುತ್ತವೆ.
Pesticide residues ಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು:
ದಿನದಿಂದ ದಿನಕ್ಕೆ ಇಂತಹ ಕೀಟನಾಶಕಗಳ ಶೇಷಗಳು ದೇಹದಲ್ಲಿ ಸೇರುವುದರಿಂದ:
- ಹೊಟ್ಟೆ ಸಂಬಂಧಿತ ಸಮಸ್ಯೆಗಳು ಕಾಣಿಸಬಹುದು
- ಚರ್ಮದ ಅಲರ್ಜಿ ಅಥವಾ ಸಂವೇದನೆ ಹೆಚ್ಚಾಗಬಹುದು
- ಹಾರ್ಮೋನ್ ಅಸಮತೋಲನ ಮತ್ತು ನರಗಳ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗಬಹುದು
- ಮಕ್ಕಳಲ್ಲಿ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ
- ದೀರ್ಘಕಾಲದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು, ಅದರಲ್ಲೂ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳ ಸಂಭವ ಹೆಚ್ಚಾಗಿರುತ್ತದೆ.
ಇದರಿಂದ, ನಾವು ಆರೋಗ್ಯಕರ ಆಹಾರ ತಿನ್ನುತ್ತಿದ್ದೇವೆ ಎಂಬ ಭಾವನೆಯಲ್ಲೇ, ಅಜಾಗರೂಕತೆಯಿಂದ ಹಾನಿಕಾರಕ ರಾಸಾಯನಿಕಗಳನ್ನು ಕೂಡ ಸೇವಿಸುವ ಪರಿಸ್ಥಿತಿ ಉಂಟಾಗಬಹುದು.
ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಮೊದಲು ಎಚ್ಚರ! ಇಲ್ಲದಿದ್ದರೆ Pesticide residues ಗಳಿಂದ ನಿಮ್ಮ ಆರೋಗ್ಯಕ್ಕೆ ಅಪಾಯ!
ಕೀಟನಾಶಕ ಉಳಿಕೆಗಳನ್ನು ಕಡಿಮೆ ಮಾಡುವ ಹಲವಾರು ವಿಧಾನಗಳು
1. ಖರೀದಿಸುವಾಗಲೇ ಎಚ್ಚರಿಕೆ ವಹಿಸಿ
- ಸಾಧ್ಯವಾದಷ್ಟು ಸ್ಥಳೀಯ ರೈತರಿಂದ ಅಥವಾ ಫಾರ್ಮ್‌ಗಳಿಂದ ಹಣ್ಣು-ತರಕಾರಿಗಳನ್ನು ಖರೀದಿಸಿ.
- ಹಣ್ಣುಗಳು ತುಂಬಾ ಹೊಳೆಯುತ್ತಿದ್ದರೆ, ಅವುಗಳ ಮೇಲೆ ಮೇಣದ ಅಥವಾ ರಾಸಾಯನಿಕ ಲೇಪನ ಇರಬಹುದು.
- ಋತುಕಾಲಿಕ (seasonal) ಹಣ್ಣು-ತರಕಾರಿಗಳನ್ನು ಆರಿಸುವುದು ಉತ್ತಮ.
ಮೊದಲ ಹಂತದಲ್ಲೇ ಸರಿಯಾದ ಆಯ್ಕೆ ಮಾಡಿದರೆ, ನಂತರದ ಶುದ್ಧೀಕರಣ ಸುಲಭವಾಗುತ್ತದೆ.
2. ಒಣಗಿಸುವುದು ಮತ್ತು ಒರೆಸುವುದು
- ಹಣ್ಣುಗಳನ್ನು ಕಾಗದದ ಟವೆಲ್ ಅಥವಾ ಸ್ವಚ್ಛ ಬಟ್ಟೆಯಿಂದ ಒರೆಸುವುದು ಕೆಲವು ಕೀಟನಾಶಕಗಳನ್ನು ತೆಗೆದುಹಾಕುತ್ತದೆ.
- ಇದು ವಿಶೇಷವಾಗಿ ಸೇಬು, ಕಿತ್ತಳೆ ಮುಂತಾದ ಹಣ್ಣುಗಳಿಗೆ ಉಪಯುಕ್ತ.
3. Running water ನಲ್ಲಿ ತೊಳೆಯುವುದು
ಹಣ್ಣು ಮತ್ತು ತರಕಾರಿಗಳನ್ನು ಹರಿಯುವ (Running tap water) ಸ್ವಚ್ಛ ನೀರಿನಲ್ಲಿ 20–30 ಸೆಕೆಂಡುಗಳ ಕಾಲ ತೊಳೆಯಿರಿ. ನೀರಿನ ಒತ್ತಡದಿಂದ(force) ಮೇಲ್ಮೈಯಲ್ಲಿ ಇರುವ ಕೀಟನಾಶಕಗಳು ಕಡಿಮೆಯಾಗುತ್ತವೆ.
4. ಉಪ್ಪು ನೀರಿನ ಬಳಕೆ: ಒಂದು ಬಟ್ಟಲಿನಲ್ಲಿ ನೀರು ತೆಗೆದು ಅದರಲ್ಲಿ 2% ಉಪ್ಪು ಹಾಕಿ. ತರಕಾರಿಗಳನ್ನು 10–15 ನಿಮಿಷ ನೆನೆಸಿಡಿ.
5. ಲಿಂಬೆ ಮತ್ತು ವಿನೇಗರ್ ಬಳಕೆ
ವಿಧಾನ:
- 1 ಕಪ್ ನೀರು
- 1 ಟೇಬಲ್ ಸ್ಪೂನ್ ಲಿಂಬೆ ರಸ
- 2 ಟೇಬಲ್ ಸ್ಪೂನ್ ವಿನೇಗರ್
ಇವುಗಳನ್ನು ಮಿಶ್ರಣ ಮಾಡಿ ಹಣ್ಣುಗಳ ಮೇಲೆ ಸ್ಪ್ರೇ ಮಾಡಿ 5–10 ನಿಮಿಷ ಬಿಡಿ. ನಂತರ ಸ್ವಚ್ಛ ನೀರಿನಲ್ಲಿ ತೊಳೆಯಿರಿ.

6. ಬೇಕಿಂಗ್ ಸೋಡಾ ವಿಧಾನ
- 1 ಕಪ್ ನೀರಿಗೆ
- 2 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ ಸೇರಿಸಿ. ಇದು ಕೀಟನಾಶಕಗಳ pH ಮಟ್ಟವನ್ನು ತಟಸ್ಥಗೊಳಿಸುತ್ತದೆ.
7. ಎಲೆ ತರಕಾರಿಗಳ ಸ್ವಚ್ಛತೆ
ಕೋಸು, ಪಾಲಕ್, ಲೆಟ್ಯೂಸ್ ಮುಂತಾದವುಗಳಲ್ಲಿ ಹೊರಗಿನ ಎಲೆಗಳನ್ನು(Outer layer) ತೆಗೆದುಹಾಕಿ, ನಂತರ ಉಪ್ಪು ನೀರಿನಲ್ಲಿ ತೊಳೆಯಿರಿ. ಇವು ಮಣ್ಣಿನ ಸಮೀಪ ಬೆಳೆಯುವುದರಿಂದ ಹೆಚ್ಚು ಕಲುಷಿತವಾಗಿರುತ್ತವೆ.
8. ಬ್ರಷ್ ಬಳಸಿ ತೊಳೆಯುವುದು
ಕ್ಯಾರೆಟ್, ಆಲೂಗಡ್ಡೆ, ಕಲ್ಲಂಗಡಿ ಮುಂತಾದ ಗಟ್ಟಿಯಾದ ಹಣ್ಣು ಮತ್ತು ತರಕಾರಿಗಳನ್ನು ಸಾಫ್ಟ್ ಬ್ರಷ್ ಬಳಸಿ ತೊಳೆದು ಒರೆಸಿರಿ. ಇದು ಮೇಲ್ಮೈಯಲ್ಲಿರುವ ರಾಸಾಯನಿಕಗಳನ್ನು ತೆಗೆದುಹಾಕುತ್ತದೆ.
9. ಸಿಪ್ಪೆ ತೆಗೆದುಹಾಕುವುದು
ಮಾವು, ಸೇಬು, ಪೇರಳೆ, ಪೀಚ್ ಮುಂತಾದ ಹಣ್ಣುಗಳ ಸಿಪ್ಪೆ ತೆಗೆದರೆ ಕೀಟನಾಶಕಗ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಪೋಷಕಾಂಶಗಳು ಕೂಡ ಕಡಿಮೆಯಾಗಬಹುದು.
ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಮೊದಲು ಎಚ್ಚರ! ಇಲ್ಲದಿದ್ದರೆ Pesticide residues ಗಳಿಂದ ನಿಮ್ಮ ಆರೋಗ್ಯಕ್ಕೆ ಅಪಾಯ!
10. ನೆನೆಸುವುದು: ಹಣ್ಣು-ತರಕಾರಿಗಳನ್ನು 30 ನಿಮಿಷದಿಂದ 1 ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ 2–3 ಬಾರಿ ತೊಳೆಯಿರಿ. ಇದು ಆಳವಾದ ಕೀಟನಾಶಕಗಳನ್ನು ಕಡಿಮೆ ಮಾಡುತ್ತದೆ.
11. ಬಿಸಿ ನೀರಿನ ವಿಧಾನ: ತರಕಾರಿಗಳನ್ನು ಒಂದು ನಿಮಿಷ ಕುದಿಯುವ ನೀರಿನಲ್ಲಿ ಹಾಕಿ, ನಂತರ ತಣ್ಣೀರು ಹಾಕಿ ತೊಳೆಯಿರಿ. ಇದು ಹೆಚ್ಚಿನ ರಾಸಾಯನಿಕಗಳನ್ನು ತೆಗೆದುಹಾಕುತ್ತದೆ.
12. ಬೇಯಿಸುವುದು: ಬೇಯಿಸುವುದರಿಂದ ಕೀಟನಾಶಕಗಳ ಪ್ರಮಾಣ ಬಹಳ ಕಡಿಮೆಯಾಗುತ್ತದೆ. ವಿಶೇಷವಾಗಿ ಹೂಕೋಸು, ಬೀನ್ಸ್, ಕ್ಯಾರೆಟ್.
13. ನೈಸರ್ಗಿಕ ಕ್ಲೀನರ್‌ಗಳು: ಮಾರುಕಟ್ಟೆಯಲ್ಲಿ ಸಿಗುವ ಫ್ರೂಟ್ & ವೆಜಿಟೆಬಲ್ ಕ್ಲೀನರ್‌ಗಳು ಬಳಸಬಹುದು. ಆದರೆ ಅಮೋನಿಯಾ ಇರುವ ಉತ್ಪನ್ನಗಳನ್ನು ಬಳಸದಿರಿ.
14. ಓಜೋನ್ ವಿಧಾನ: ಓಜೋನ್ ನೀರು ಅಥವಾ ಗ್ಯಾಸನ್ನು ಬಳಸುವ ಯಂತ್ರಗಳು ಈಗ ಲಭ್ಯವಿವೆ. ಇದು ಕೀಟನಾಶಕಗಳನ್ನು ಆಕ್ಸಿಡೈಸ್ ಮಾಡಿ ತೆಗೆದುಹಾಕುತ್ತದೆ.
15. ವಿಭಿನ್ನ ಆಹಾರ ಸೇವನೆ: ಒಂದೇ ತರದ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಡಿ. ವಿವಿಧ ಆಹಾರ ಸೇವನೆಯಿಂದ ಕೀಟನಾಶಕಗಳ ಒಟ್ಟು ಪರಿಣಾಮ ಕಡಿಮೆಯಾಗುತ್ತದೆ.
16. ಜ್ಯೂಸ್ ಮತ್ತು ಪ್ರೊಸೆಸಿಂಗ್: ದ್ರಾಕ್ಷಿ ಮುಂತಾದವುಗಳನ್ನು ಜ್ಯೂಸ್ ಮಾಡಿದರೆ ಕೀಟನಾಶಕ ಮಟ್ಟ ಕಡಿಮೆಯಾಗುತ್ತದೆ. ಫಿಲ್ಟರಿಂಗ್ ಪ್ರಕ್ರಿಯೆಯಿಂದ ಇನ್ನಷ್ಟು ಕಡಿಮೆಯಾಗುತ್ತದೆ.
17. ಸಾವಯವ (Organic) ಆಹಾರ: ಸಾವಯವವಾಗಿ ಬೆಳೆದ ಆಹಾರದಲ್ಲಿ ಕೀಟನಾಶಕದ ಪ್ರಮಾಣ ಕಡಿಮೆ ಇರುತ್ತದೆ. ಆದರೆ ಸಂಪೂರ್ಣವಾಗಿ ಮುಕ್ತವಾಗಿವಾಗಿರುವುದಿಲ್ಲ, ಹಾಗೂ ಬೆಲೆ ಹಿಚ್ಚಿರುತ್ತದೆ.
ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಮೊದಲು ಎಚ್ಚರ! ಇಲ್ಲದಿದ್ದರೆ Pesticide residues ಗಳಿಂದ ನಿಮ್ಮ ಆರೋಗ್ಯಕ್ಕೆ ಅಪಾಯ!
❌ ತಪ್ಪಿಸಬೇಕಾದ ವಿಷಯಗಳು
- ರಾಸಾಯನಿಕ ಕ್ಲೀನರ್, ಸಾಬೂನು ಅಥವಾ ಡಿಟರ್ಜೆಂಟ್ ಬಳಕೆ ಮಾಡಬಾರದು
- ತೊಳೆಯದೆ ತಿನ್ನುವುದು
ಮುಖ್ಯ ಸೂಚನೆಗಳು
✔️ ಯಾವಾಗಲೂ ತಿನ್ನುವ ಮೊದಲು ತೊಳೆಯಿರಿ
✔️ ಮಕ್ಕಳಿಗೆ ವಿಶೇಷ ಗಮನ ಕೊಡಿ
✔️ ಮನೆಯಲ್ಲೇ ಸರಳ ವಿಧಾನಗಳನ್ನು ಅನುಸರಿಸಿ
ಸಾರಾಂಶ
ಹಣ್ಣು ಮತ್ತು ತರಕಾರಿಗಳು ನಮ್ಮ ಆರೋಗ್ಯಕ್ಕೆ ಅತ್ಯವಶ್ಯವಾಗಿವೆ. ಆದರೆ ಅವುಗಳಲ್ಲಿರುವ ಕೀಟನಾಶಕ ಉಳಿಕೆಗಳು ನಮ್ಮ ಆರೋಗ್ಯಕ್ಕೆ ಅಪಾಯವಾಗಬಹುದು. ಆದರೆ, ನಾವು ಸರಿಯಾದ ಕ್ರಮಗಳನ್ನು ಅನುಸರಿಸುವುದರ (ತೊಳೆಯುವುದು, ನೆನೆಸುವುದು,ಸಿಪ್ಪೆ ತೆಗೆದುಹಾಕುವುದು, ಬೇಯಿಸುವುದು)ಮೂಲಕ ನಾವು ಕೀಟನಾಶಕಗಳ ಪ್ರಮಾಣವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಆರೋಗ್ಯಕರ ಜೀವನಕ್ಕಾಗಿ, ಸುರಕ್ಷಿತ ಆಹಾರ ಸೇವನೆ ಅತ್ಯಂತ ಮುಖ್ಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ:
https://www.who.int/news-room/fact-sheets/detail/pesticide-residues-in-food or https://sk6kannada.in/?p=513&preview=true